✍🏻 ಚೈತ್ರ ಕುಂದಾಪುರ
ನನಗೆ ಈಗಲೂ ನೆನಪಿದೆ.. ಎಬಿವಿಪಿಯ ರಾಷ್ಟೀಯ ಅಧಿವೇಶನದಲ್ಲಿ ವಿಶೇಷ ಅಂತ ಕರೆಸಿಕೊಳ್ಳುವ ಕಾರ್ಯಕ್ರಮ ಅಂತ ಒಂದು ಇದ್ರೆ ಅದು "ಪ್ರೊ. ಯಶವಂತ ರಾವ್ ಕೇಳ್ಕರ್ ಯುವ ಪುರಸ್ಕಾರ " ಪ್ರಶಸ್ತಿ ಪ್ರಧಾನ ಸಮಾರಂಭ.
ಪ್ರತಿ ಬಾರಿ ಸಾಮಾಜಿಕ ಕೆಲಸದಲ್ಲಿ ತೊಡಗಿಸಿಕೊಂಡ ಯುವ ಸಾಧಕರನ್ನು ಗುರುತಿಸಿ 50 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕವನ್ನು ಹೊಂದಿದ ಪುರಸ್ಕಾರವದು.. ಸಾಮಾನ್ಯವಾಗಿ ವ್ಯಕ್ತಿ ಪೂಜೆ ಸಲ್ಲದ, ಭಗವಾ ಧ್ವಜವೇ ಗುರುವೆಂದು ಸ್ವೀಕರಿಸಿದ ಸಂಘ ಮತ್ತು ಎಬಿವಿಪಿಯಲ್ಲಿ ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಪ್ರಶಸ್ತಿ ಕೊಡುವುದು ಕಂಡಾಗೆಲ್ಲ ನನಗೆ ಆಶ್ಚರ್ಯ ಮತ್ತು ಗೊಂದಲವಾಗುತ್ತಿತ್ತು. ಆದರೆ ಅದಕ್ಕೆಲ್ಲ ಉತ್ತರವೆಂಬಂತೆ ಕಂಡದ್ದು ಯಶವಂತ ರಾವ್ ಕೇಳ್ಕರ್ ಎನ್ನುವ ಮೇಧಾವಿ ಕೆಲವೇ ಕೆಲವು ವಿದ್ಯಾರ್ಥಿಗಳಿಂದ ಪ್ರಾರಂಭವಾದ ಸಂಘಟನೆಯನ್ನು ಜಗತ್ತಿನ ಅತಿ ದೊಡ್ಡ ವಿದ್ಯಾರ್ಥಿ ಸಂಘಟನೆಯಾಗಿ ಬೆಳೆಸಿದ ಪರಿ. ಎಬಿವಿಪಿಯಲ್ಲಿ ಸಾಮಾನ್ಯವಾಗಿ ಅತ್ಯಂತ ಚುರುಕಾಗಿ ಕೆಲಸ ಮಾಡುವ ಕಾರ್ಯಕರ್ತನಿದ್ದರೆ ಆತನನ್ನು ನೋಡಿ ಹಿರಿಯರು "ಯಶವಂತ ರಾವ್ ತರ ಇವನ ಹೆಸರಲ್ಲೂ ಒಂದು ಪ್ರಶಸ್ತಿ ಶುರು ಮಾಡಬೇಕಾಗುತ್ತೆ ನೋಡ್ತಿರಿ ' ಅಂತ ತಮಾಷೆ ಮಾಡಿ ಹುರಿದುಂಬಿಸುವುದಿದೆ. ಇದಕ್ಕೆ ಕಾರಣ ಯಶವಂತ ರಾವ್ ಕೇಳ್ಕರ್ ಎನ್ನುವ ಧೀಮಂತ ವ್ಯಕ್ತಿತ್ವ ಸಂಘಟನೆಯ ರೂಪದಲ್ಲಿ ಜೀವಂತ ಸಿದ್ಧಾಂತವಾಗಿ ಉಳಿದಿರುವುದು.
"ನಾನಳಿವೆ ನೀನಳಿವೆ ನಮ್ಮೆಲುಬುಗಳ ಮೇಲೆ ಮೂಡುತಿರಲಿ ಹೊಸ ಭಾರತದ ಲೀಲೆ" ಎಂಬಂತೆ ಬದುಕಿದವರು ಕೇಳ್ಕರ್..
ಎಡಪಂಥೀಯ ನಕ್ಸಲ್ ವಾದಗಳೇ ಕ್ಯಾಂಪಸ್ ನಲ್ಲಿ ತುಂಬಿ ತುಳುಕುತ್ತಿದ್ದ ಕಾಲಘಟ್ಟದಲ್ಲಿ ಇದಕ್ಕೆಲ್ಲ ಎದುರಾಗಿ ಈ ನೆಲದ ಸಂಸ್ಕೃತಿಗೆ ತಕ್ಕಂತೆ ಬದುಕುವಂತೆ ವಿದ್ಯಾರ್ಥಿಗಳನ್ನು ರೂಪಿಸುವುದಕ್ಕಾಗಿ
1949 ರಲ್ಲಿ ಬಾಲರಾಜ್ ಮೋಧಕ್ ಎನ್ನುವ ಆರ್ ಎಸ್ ಎಸ್ ಪ್ರಚಾರಕರೊಬ್ಬರಿಂದ ಬೆರಳೆಣಿಕೆಯ ವಿದ್ಯಾರ್ಥಿಗಳೊಂದಿಗೆ ಪ್ರಾರಂಭಿಸುತ್ತಾರೆ. ಆದರೆ ಇಂತಹ ಸಂಘಟನೆಯೊಂದನ್ನು ಸಾಮಾಜಿಕ ಕ್ಷೇತ್ರದಲ್ಲಿ ಸಾಗರದಂತೆ ಬೆಳೆಸಿದ ಕೀರ್ತಿ ಮಾತ್ರ ಕೇಳ್ಕರ್ ಅವರಿಗೆ ಸಲ್ಲಬೇಕು.
ಮೂಲತಃ ಆರ್ ಎಸ್ ಎಸ್ ಪ್ರಚಾರಕರಾಗಿದ್ದ ಕೇಳ್ಕರ್ ಅವರು ಪುಣೆ ವಿಶ್ವವಿದ್ಯಾನಿಲಯದಲ್ಲಿ ಅಗ್ರ ಶ್ರೇಣಿಯಲ್ಲಿ ಸಾಹಿತ್ಯದಲ್ಲಿ ಬಿ.ಎ ಪದವಿ ಪಡೆದವರು.
ಸಂಘ ಪ್ರಚಾರಕ ಜೀವನದ ನಂತರ ಮುಂಬೈ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ಪ್ರಾರಂಭಿಸುತ್ತಾರೆ.
ಅದೇ ಸಂದರ್ಭದಲ್ಲಿ ಎಬಿವಿಪಿಯೂ ತನ್ನ ಕಾರ್ಯವನ್ನು ಕ್ಯಾಂಪಸ್ ನಲ್ಲಿ ಪ್ರಾರಂಭಿಸಿದ್ದರಿಂದ ಕೇಳ್ಕರ್ ಅವರು ಎಬಿವಿಪಿಯ ನಗರ ಅಧ್ಯಕ್ಷರಾಗಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಅಲ್ಲಿಂದ ಪ್ರಾರಂಭವಾದ ಅವರ ಎಬಿವಿಪಿ ಜೊತೆಗಿನ ನಂಟು ಅತಿ ಶೀಘ್ರವಾಗಿ ಅವರು ರಾಜ್ಯಾಧ್ಯಕ್ಷರಾಗುವಂತೆ ಮಾಡಿತು.
1958 ರಿಂದಾಚೆಗೆ ಎಬಿವಿಪಿ ಬೆಳೆದು ಬಂದ ಪರಿಯ ಹಿಂದೆ ಇದ್ದದ್ದು ಯಶವಂತ ರಾವ್ ಕೇಳ್ಕರ್ ಎನ್ನುವ ಶಿಲ್ಪಿಯ ಶ್ರಮ.
ಕ್ಯಾಂಪಸ್ ಗಳಲ್ಲಿ ವಿದ್ಯಾರ್ಥಿ ಚುನಾವಣೆಯ ನೆಪದಲ್ಲಿ ರಾಜಕೀಯ ಪಕ್ಷಗಳು ಹಣ ಸುರಿಯುವುದನ್ನು ಪ್ರಬಲವಾಗಿ ವಿರೋಧಿಸುತ್ತಿದ್ದ ಕೇಳ್ಕರ್ ಅವರು ಜಾತಿ ಮುಕ್ತ ಸಮಾಜ ಕಟ್ಟುವ ಕನಸು ಹೊಂದಿದ್ದವರು.
'ಆದರ್ಶ ರಾಜ್ಯ ' ದ ಕಲ್ಪನೆಯಲ್ಲಿ ಅತೀವವಾದ ನಂಬಿಕೆ ಇಟ್ಟಿದ್ದ ಕೇಳ್ಕರ್ ಅವರು 70 ರ ದಶಕದಲ್ಲೇ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ್ದರೂ ದಲಿತ ಸಮುದಾಯದ ವಿದ್ಯಾರ್ಥಿಗಳು ತನ್ನ ಮನೆಯೊಳಗೆ ಹೋಗಿ ನೀರು ಕುಡಿಯುವಂತೆ ನಿರ್ದೇಶಿಸುತ್ತಿದ್ದರು. ಯಾವತ್ತೂ ಯಾರನ್ನೂ ಜಾತಿ, ವರ್ಗ, ವರ್ಣದ ಕಾರಣಕ್ಕೆ ದೂರವಿಡಬಾರದು ಎನ್ನುವ ಅವರ ನಿಲುವನ್ನು ಇಂದಿಗೂ ಎಬಿವಿಪಿ ತನ್ನ ಬದ್ಧತೆ ಎಂಬಂತೆ ಪಾಲಿಸಿಕೊಂಡು ಬಂದಿದೆ. ಆ ಕಾರಣಕ್ಕಾಗಿಯೇ ಎಬಿವಿಪಿಯ ಯಾವುದೇ ಕಾರ್ಯಕರ್ತನಿಗೆ ತನ್ನ ಸಹ ಕಾರ್ಯಕರ್ತನ ಜಾತಿ ತಿಳಿದಿರುವುದಿಲ್ಲ.
ಹೋರಾಟಗಳಿಂದಲೇ ರೂಪಿತವಾದ ಸಂಘಟನೆಯೊಂದು ಸೈದ್ಧಾಂತಿಕವಾಗಿ ಇಷ್ಟು ಗಟ್ಟಿಯಾಗಿ ನಿಲ್ಲಲು ಕಾರಣ ಅದರ ಭದ್ರವಾದ ಬೇರು.
ಕೇಳ್ಕರ್ ಅವರಿಗೆ ಸಾಂಘಿಕ ಕಾರ್ಯದಲ್ಲಿದ್ದ ನಂಬಿಕೆ ವಿದ್ಯಾರ್ಥಿ ಸಮುದಾಯ ದೊಡ್ಡ ಮಟ್ಟದಲ್ಲಿ ಬೀದಿಗಿಳಿದು ಹೋರಾಡುವುದಕ್ಕೆ ಸ್ಫೂರ್ತಿ ನೀಡಿತು.
ಎಡ ಸಿದ್ದಾಂತ, ನಕ್ಸಲ್ ವಾದಗಳ ಸಂಘಟನೆಗಳೇ ಶಾಲಾ ಕಾಲೇಜುಗಳಲ್ಲಿ ತುಂಬಿ ತುಳುಕುತ್ತಿದಾಗಲೇ
1975 ರ ತುರ್ತು ಪರಿಸ್ಥಿತಿ ವಿರೋಧಿಸಿ 10 ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಹೋರಾಟದಲ್ಲಿ ಜೈಲು ಸೇರುತ್ತಾರೆ, 1978 ರಲ್ಲಿ 350 ಕ್ಕೂ ಹೆಚ್ಚು ಗ್ರಾಮಗಳಿಗೆ ಸಾವಿರಾರು ವಿದ್ಯಾರ್ಥಿಗಳು ತೆರಳಿ ಜಾಗೃತಿ ಕಾರ್ಯದಲ್ಲಿ ತೊಡಗಿಸಿಕೊಂಡು "ಗ್ರಾಮೋತ್ಥಾನಕ್ಕಾಗಿ ವಿದ್ಯಾರ್ಥಿಗಳು " ಎಂಬ ಕಲ್ಪನೆಯನ್ನು ಸಾಕಾರಗೊಳಿಸುತ್ತಾರೆ. ಇಂತಹ ನೂರಾರು ಸಾಮಾಜಿಕ ಪರಿವರ್ತನೆಯಲ್ಲಿ ವಿದ್ಯಾರ್ಥಿಗಳು ಧುಮುಕುವಂತೆ ಮಾಡುವುದರ ಹಿಂದೆ ಇದ್ದದ್ದು ಯಶವಂತ ರಾವ್ ಕೇಳ್ಕರ್ ಎನ್ನುವ ಶಿಲ್ಪಿ ಹಾಕಿದ ಅಡಿಗಲ್ಲು.
ಇಂದು ಜಾಗತಿಕ ಮಟ್ಟದಲ್ಲಿ ಎಬಿವಿಪಿ ತನ್ನ ಸೈದ್ದಂತಿಕ ಭೂಮಿಯನ್ನು ವಿಸ್ತರಿಸಿ ನಿಂತಿದೆ.
1991 ರಿಂದ ಯುವಕರನ್ನು ಸಮಾಜ ಸೇವೆಯತ್ತ ಸೆಳೆಯುವ ಕಾರಣಕ್ಕೆ "ಯಶವಂತ ರಾವ್ ಕೇಳ್ಕರ್ ಯುವ ಪುರಸ್ಕಾರ " ಪ್ರಶಸ್ತಿ ನೀಡಲಾಗುತ್ತಿದೆ. ಆ ಮೂಲಕ ಕೋಟ್ಯಂತರ ಕಾರ್ಯಕರ್ತರನ್ನು ದೇಶಕ್ಕಾಗಿ ಬದುಕುವಂತೆ ಪ್ರೇರೇಪಿಸಿದ ಮಹಾನ್ ಚೇತನವನ್ನು ಚಿರಕಾಲ ನೆನೆಯುವ ಪ್ರಯತ್ನ ನಡೆಯುತ್ತಿದೆ.
ಇಂದು ಜಗತ್ತಿನ ಅತಿ ದೊಡ್ಡ ವಿದ್ಯಾರ್ಥಿ ಸಂಘಟನೆಯನ್ನು ಸೈದ್ಧಾಂತಿಕವಾಗಿ ಕೆತ್ತಿದ ಯಶವಂತ ರಾವ್ ಕೇಳ್ಕರ್ ಎನ್ನುವ ಶಿಲ್ಪಿಯ ಜನ್ಮದಿನ.
ಅಂತಹ ಸಂಘಟನಾ ಶಾಸ್ತ್ರದ ಸೂತ್ರಕಾರನಿಗೊಂದು ನಮನ ಸಲ್ಲಿಸೋಣ..
✍️ ಕಾಳಿಕಾ ಛಾಯೆ