ಕೊರೋನಾ ಎಂಬ ಮಹಾಮಾರಿ ಜಗತ್ತನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಈ ಸಂದರ್ಭ ದೇಶವಾಸಿಗಳನ್ನು ರಕ್ಷಿಸುವುದಕ್ಕಾಗಿ ಈ ದೇಶದ ಪ್ರಧಾನಿ ನರೇಂದ್ರ ಮೋದಿಜೀ 21 ದಿನದ Lockdown ಘೋಷಿಸಿದ್ದಾರೆ. 21 ದಿನ ಮನೆಯೊಳಗೇ ಕುಳಿತು ಮಾಡುವುದಾರೂ ಏನು ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಈ 21 ದಿನ ಎಲ್ಲರೂ ಗೃಹಬಂಧನವನ್ನು ಎದುರಿಸಲೇಬೇಕು. ಹಾಗೆಂದು ಸುಮ್ಮನೆ ಕುಳಿತು ಬಿಟ್ಟರೆ ಕೊರೊನಗಿಂತ ದೊಡ್ಡ ಶತ್ರು ಆಲಸ್ಯ ನಮ್ಮನ್ನು ಕೊಂದು ಬಿಡುತ್ತದೆ. ಅದಕ್ಕಾಗಿ ಒಂದಷ್ಟು ಯೋಜನೆಗಳನ್ನು ಮಾಡಿಕೊಳ್ಳಲೇ ಬೇಕಿದೆ. ಅದಕ್ಕಾಗಿಯೇ ಇಲ್ಲೊಂದಷ್ಟು ಸಲಹೆ ನೀಡಿದ್ದೇನೆ ನೀವು ಪ್ರಯತ್ನಿಸಿ. ಹಿಂದೂ ಸಂಪ್ರದಾಯದಲ್ಲಿ 21 ದಿನಕ್ಕೆ ಬಹಳ ಪ್ರಾಮುಖ್ಯತೆ ಇದೆ. 21 ದಿನ ಯಾವುದೇ ಕಾರ್ಯವನ್ನು ಎಡೆಬಿಡದೆ ಮಾಡಿಕೊಂಡು ಬಂದರೆ ನಂತರ ಅದು ನಿರಂತರವಾಗಿ ಮುಂದುವರಿಸಿಕೊಂಡು ಹೋಗಲು ರೂಢಿಯಾಗಿ ಬಿಡುತ್ತದಂತೆ.
ಜಪ-ತಪ, ಧ್ಯಾನ ಯೋಗದಂತಹ ಅಭ್ಯಾಸಗಳನ್ನು ಮಾಡುವ ಆಸಕ್ತಿ ಇರುವವರು 21 ದಿನ ಮನೆಯಲ್ಲೇ ಇರುವುದರಿಂದ ತಕ್ಷಣವೇ ಪ್ರಾರಂಭಿಸಿ. ಮತ್ತೆ ತಾನಾಗಿಯೇ ಅದು ಮುಂದುವರಿಸಿಕೊಂಡು
ಹೋಗಲು ಸಮಯವನ್ನು ಹೊಂದಿಸಿಕೊಳ್ಳುವಂತೆ ಮಾಡುತ್ತದೆ.
ಬೆಳಗ್ಗೆ ಬೇಗ ಏಳುವ ಅಭ್ಯಾಸ ಮಾಡಿಕೊಳ್ಳಬೇಕು ಅಂತ ಪ್ರಯತ್ನಿಸುತ್ತಿರುವವರು ಈ 21 ದಿನ ಮನೆಯವರ ಬಳಿ ತಪ್ಪದೆ ಬೇಗ ಎಬ್ಬಿಸುವುದಕ್ಕೆ ಹೇಳಿ 21 ದಿನದ ಬಳಿಕ ನಿಮ್ಮ ದೇಹ ಮತ್ತು ಮನಸ್ಸು ಬೇಗ ಏಳುವುದಕ್ಕೆ ಒಗ್ಗಿಕೊಂಡು ಬಿಡುತ್ತದೆ. ನಂತರ ನೀವು ತಡವಾಗಿ ಏಳಬೇಕೆಂದರೂ ನಿದ್ರೆ ಬರುವುದಿಲ್ಲ.
ಬಹಳ ಜನರಿಗೆ ನಿತ್ಯ ಕೆಲಸದ ಒತ್ತಡದಲ್ಲಿ ಹೊರಗಿನ ಜಂಕ್ ಫುಡ್ ಗಳನ್ನು ತಿಂದು ದೇಹದ ನಿಯಂತ್ರಣ ಮೀರಿ ಬೊಜ್ಜು ಆವರಿಸಿಕೊಂಡಿರುತ್ತದೆ. 21 ದಿನ ಮನೆಯಲ್ಲೇ ಇರುವುದರಿಂದ ಆಹಾರದಲ್ಲಿ ನಿಯಂತ್ರಣವಿರಿಸಿಕೊಂಡು ವ್ಯಾಯಾಮಕ್ಕೂ ಆರಾಮವಾಗಿ ಸಮಯ ಕೊಟ್ಟು ನಿಮ್ಮ ದೇಹದ ಆರೈಕೆ ಮಾಡಿಕೊಳ್ಳಿ.
21 ದಿನ ಅಡುಗೆ ಕಲಿಯುವವರಿಗೆ ಸುವರ್ಣ ದಿನ ಕೂಡ.
ಹೆಣ್ಣುಮಕ್ಕಳು ದಿನ ಕೆಲಸದ ಒತ್ತಡ, ವಾಷ್ ರೂಮ್ ಗೆ ಹೋಗಬೇಕಾಗುತ್ತದೆ ಅನ್ನುವ ಕಾರಣಗಳಿಂದ ನೀರು ಕುಡಿಯುವುದನ್ನು ಕಡಿಮೆ ಮಾಡಿರುತ್ತೀರಿ. ಈ 21 ದಿನ ಅದೆಲ್ಲದರ ಚಿಂತೆ ಬಿಟ್ಟು ದಿನಕ್ಕೆ ಅರ್ಧ ಘಂಟೆಗೊಮ್ಮೆ ಅಲಾರಾಂ ಇಟ್ಟುಕೊಂಡು
6 ಲೀಟರ್ ನೀರು ಕುಡಿಯಿರಿ. 21 ದಿನದಲ್ಲಿ ಮುಖದ ಕಲೆ, ಮೊಡವೆಗಳೆಲ್ಲ ಮಾಯವಾಗಿರುತ್ತದೆ.
ಹೊಸ ಕರಕುಶಲ ಕಲೆ ಕಲಿಯುವ ಆಸಕ್ತಿ ಇರುವವರು ಈ 21 ದಿನ ಯೂ ಟ್ಯೂಬ್ ವಿಡಿಯೋ ನೋಡಿ ಅದನ್ನು ಪ್ರಯತ್ನಿಸಿ.
ಕೆಲಸದ ಒತ್ತಡದಲ್ಲಿ ಮರೆತೇ ಬಿಟ್ಟಿದ್ದ ನಿಮ್ಮ ಹಳೆಯ ಹವ್ಯಾಸಗಳಿಗೆ ಮತ್ತೆ ಚಾಲನೆ ಕೊಡಿ.
ಇನ್ನುಳಿದಂತೆ ಧೂಳು ಹಿಡಿದ ಪುಸ್ತಕಗಳನ್ನು ಒರೆಸಿ ಮಸ್ತಕದೊಳಗೆ ತುಂಬಿಸಿಕೊಳ್ಳುವ ಪ್ರಯತ್ನ ಮಾಡಿ.
ಹೊಸ ಬಿಸಿನೆಸ್ ಮಾಡಬೇಕು ಅಂತ ಆಸೆ ಇಟ್ಟುಕೊಂಡವರು ಈ 21 ದಿನ ಅದಕ್ಕೆ ಸಂಬಂಧಿಸಿದಂತೆ ಒಂದಷ್ಟು ಅಧ್ಯಯನ ಮಾಡಿ ಮಾಹಿತಿ ಕಲೆ ಹಾಕಿ.. ಆನ್ ಲೈನ್ ನಲ್ಲೆ ಅದರ ಸರ್ವೇ ಮಾಡಿಕೊಳ್ಳಿ.
ಹಾ.. ಎಲ್ಲಕ್ಕಿಂತ ಹೆಚ್ಚಾಗಿ ಈ 21 ದಿನದಲ್ಲಿ ನಿಮ್ಮ ಸಂಬಂಧಿಕರು, ಸ್ನೇಹಿತರಿಗೆ ಕರೆ ಮಾಡಿ ಮಾತನಾಡಿ. ಜೀವನದಲ್ಲಿ ಹಿಂದೆಂದೂ ನೀವು ಹೀಗೆ ಬದುಕಿರಲಿಕ್ಕಿಲ್ಲ. ( ನಮ್ಮ ಹಿರಿಯರು ಪ್ಲೇಗ್ ಬಂದಾಗ ಇದನ್ನು ಅನುಭವಿಸಿರಬಹುದು. ಆದರೆ ನಮ್ಮ ಪೀಳಿಗೆಗೆ ಇದು ಹೊಸ ಅನುಭವ ) ಮುಂದೆ ಇಂತಹ ಪರಿಸ್ಥಿತಿ ಬರುವುದೂ ಬೇಡ. ಬಂದ ಸಂಕಷ್ಟವನ್ನು ಸಕಾರಾತ್ಮಕವಾಗಿ ಬಳಸಿಕೊಂಡು ಮುಂದೆ ಸಾಗುವುದೇ ಜೀವನ. ಯಾವುದೊ ರೋಗವನ್ನು, ಸರ್ಕಾರವನ್ನು, ಇನ್ಯಾವುದೋ ದೇಶವನ್ನು ಶಪಿಸಿಕೊಳ್ಳುತ್ತಾ ಕೂರುವುದರ ಬದಲು ಪ್ರಕೃತಿ ನಮ್ಮನ್ನು ನಾವು ಅರಿತುಕೊಳ್ಳುವುದಕ್ಕೆ ಒಂದು ಅವಕಾಶ ಕೊಟ್ಟಿದೆ ಎಂದೇ ಭಾವಿಸೋಣ.
ಇದರ ನಡುವೆ ದಿನಗೂಲಿಯನ್ನೇ ನಂಬಿ ಬದುಕುತ್ತಿರುವ ಅಕ್ಕ ಪಕ್ಕದವರಿಗೆ ಇರುವುದರಲ್ಲೇ ಸ್ವಲ್ಪ ಅಕ್ಕಿ ಬೇಳೆ ಕೊಟ್ಟು ವಿಪತ್ತಿನಲ್ಲಿ ಮಾನವರಾಗುವ ಅವಕಾಶ ಪಡೆದುಕೊಳ್ಳೋಣ. ಮನೆಯಲ್ಲೇ ಇದ್ದೇವೆ ಅಂತ ದಿನಕ್ಕೆ ನಾಲ್ಕು ಬಾರಿ ರುಚಿ ರುಚಿಯಾಗಿ ತಿಂಡಿ ತಿನಿಸು ಮಾಡಿ ತಿನ್ನುವುದಕ್ಕೆ ಸ್ವಲ್ಪ ನಿಯಂತ್ರಣ ಹಾಕಿಕೊಳ್ಳಿ. ಯಾಕೆಂದರೆ ಈಗಾಗಲೇ ದಾಸ್ತಾನು ಇರುವ ಅಗತ್ಯ ವಸ್ತುಗಳನ್ನು ಬಾಯಿ ಚಪಲಕ್ಕೆ ಖಾಲಿ ಮಾಡಿಕೊಂಡರೆ ಮುಂದೆ ಸಮಸ್ಯೆಯಾಗಬಹುದು. ಎಚ್ಚರವಿರಲಿ.
ಎಲ್ಲರಿಗೂ ಶುಭವಾಗಲಿ.
#IndiaLockDown
#Corona
#stayHomeStaySafe

No comments:
Post a Comment